ದಸರಾಗೆ ಡಿ ಬಾಸ್ ದರ್ಶನ್ ಒಡೆಯ ಟೀಸರ್ ಬಿಡುಗಡೆ

ಭಾನುವಾರ, 6 ಅಕ್ಟೋಬರ್ 2019 (05:38 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಟೀಸರ್ ಬಿಡುಗಡೆ ಯಾವಾಗ ಎಂದು ಕಾಯುತ್ತಿದ್ದ  ಅಭಿಮಾನಿಗಳಿಗೆ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ.


ಒಡೆಯ ಸಿನಿಮಾ ಟೀಸರ್ ಇದೇ ದಸರಾಗೆ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿದೆ. ಇದು ಪಕ್ಕಾ ಹಳ್ಳಿ ಹಿನ್ನಲೆಯ ಕತೆಯಾಗಿರುವುದರಿಂದ ನಾಡಹಬ್ಬದ ಸಂದರ್ಭದಲ್ಲೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

ಮೈಸೂರು ಸುತ್ತಮುತ್ತವೇ ಚಿತ್ರೀಕರಣವೂ ನಡೆದಿದೆ. ಇದೀಗ ಚಿತ್ರೀಕರಣ ಪೂರ್ತಿಯಾಗಿದ್ದು, ಟೀಸರ್ ಬಿಡುಗಡೆಯಾಗುತ್ತಿದೆ. ಕುರುಕ್ಷೇತ್ರ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ