ರಶ್ಮಿಕಾ ಮಂದಣ್ಣ-ವಿಜಯ್ ಅಭಿನಯದ ಡಿಯರ್ ಕಾಮ್ರೇಡ್ ಶೂಟಿಂಗ್ ಪ್ಯಾಕ್ ಅಪ್

ಸೋಮವಾರ, 29 ಏಪ್ರಿಲ್ 2019 (08:36 IST)
ಬೆಂಗಳೂರು: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ಈಗಾಗಲೇ ಟೀಸರ್ ಮೂಲಕ ಭಾರೀ ಸದ್ದು ಮಾಡಿದೆ.


ಇದೀಗ ಡಿಯರ್ ಕಾಮ್ರೇಡ್ ಸಿನಿಮಾ ಶೂಟಿಂಗ್ ಮುಗಿದಿದ್ದು, ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ಈಗಾಗಲೇ ಟೀಸರ್ ನಲ್ಲಿ ರಶ್ಮಿಕಾ-ವಿಜಯ್ ಲಿಪ್ ಲಾಕ್ ಮಾಡಿ ಭಾರೀ ಸುದ್ದಿಯಾಗಿದ್ದರು. ಇದೀಗ ಸಿನಿಮಾ ಬಗ್ಗೆಯೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲವಿದೆ. ಗೀತಾ ಗೋವಿಂದಂ ಸಿನಿಮಾ ನಂತರ ಮತ್ತೆ ಒಂದಾಗುತ್ತಿರುವ ರಶ್ಮಿಕಾ-ವಿಜಯ್ ಸಿನಿಮಾ ನೋಡಲು ಪ್ರೇಕ್ಷಕರಲ್ಲೂ ಕುತೂಹಲವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ