ಎಲ್ಲಾ ಸರಿಹೋಯ್ತು ಎಂದಾಗ ಧ್ರುವ ಸರ್ಜಾ ಅಭಿಮಾನಿಗಳ ಪ್ರತಿಭಟನೆ

ಗುರುವಾರ, 25 ಫೆಬ್ರವರಿ 2021 (10:28 IST)
ಬೆಂಗಳೂರು: ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ ವಿಚಾರದಲ್ಲಿ ಸ್ವತಃ ನಿರ್ದೇಶಕ, ನಿರ್ಮಾಪಕ, ನಾಯಕ ನಟನೇ ಕ್ಷಮೆ ಯಾಚಿಸಿ ಚಿತ್ರದ ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿಕೊಂಡಿದ್ದಾರೆ. ಆದರೆ ಇದೀಗ ಧ್ರುವ ಸರ್ಜಾ ಅಭಿಮಾನಿಗಳು ಪ್ರತಿಭಟನೆ ಶುರು ಮಾಡಿದ್ದಾರೆ.


ಆನ್ ಲೈನ್ ಗಳಲ್ಲಿ ಚಿತ್ರದ ಬಗ್ಗೆ ಕೆಲವರು ಋಣಾತ್ಮಕವಾಗಿ ಮಾತನಾಡುತ್ತಿರುವುದರಿಂದ ಚಿತ್ರಕ್ಕೆ ತೊಂದರೆಯಾಗುತ್ತಿದೆ. ಬೇಕೆಂದೇ ಹೀಗೆ ಮಾಡಿ ಕಿರುಕುಳ ಕೊಡುತ್ತಿದ್ದಾರೆ ಎಂದು ಧ್ರುವ ಅಭಿಮಾನಿಗಳು ವಾಣಿಜ್ಯ ಮಂಡಳಿಗೆ ದೂರಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗಿದ್ದಕ್ಕೆ ಅಂತಹ ದೃಶ್ಯಕ್ಕೆ ಕತ್ತರಿ ಹಾಕಲಿ. ಆದರೆ ಯಾರೋ ಯೂ ಟ್ಯೂಬರ್ ಗಳು ಚಿತ್ರದ ಬಗ್ಗೆ ಋಣಾತ್ಮಕವಾಗಿ ಟೀಕೆ ಮಾಡಿ ಚಿತ್ರ ಪ್ರದರ್ಶನಕ್ಕೆ ತೊಂದರೆ ಕೊಡುವುದು ಎಷ್ಟು ಸರಿ ಎಂದು ಧ್ರುವ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ