ಪೊಗರು ಬಗ್ಗೆ ಲೇಟೆಸ್ಟ್ ಮಾಹಿತಿ ಕೊಟ್ಟ ಧ್ರುವ ಸರ್ಜಾ

ಸೋಮವಾರ, 8 ಫೆಬ್ರವರಿ 2021 (08:56 IST)
ಬೆಂಗಳೂರು: ಪೊಗರು ಸಿನಿಮಾ ಇದೇ ತಿಂಗಳು 19 ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕೂ ಮೊದಲು ತಮ್ಮ ಚಿತ್ರದ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲೇಟೆಸ್ಟ್ ಮಾಹಿತಿಯೊಂದನ್ನು ನೀಡಿದ್ದಾರೆ.


ಪೊಗರು ಹಾಡುಗಳು ಈಗಾಗಲೇ ಯೂ ಟ್ಯೂಬ್ ನಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಹೀಗಾಗಿ ಅಡಿಯೋ ಬಿಡುಗಡೆ ಸಮಾರಂಭವನ್ನು ಚಿತ್ರತಂಡ ಭರ್ಜರಿಯಾಗಿ ಆಚರಿಸಲು ನಿರ್ಧರಿಸಿದೆ. ಹೀಗಾಗಿ ಇದೇ ತಿಂಗಳು 14 ರಂದು ಅಂದರೆ ವ್ಯಾಲೆಂಟೈನ್ಸ್ ಡೇ ದಿನ ದಾವಣಗೆರೆಯಲ್ಲಿ ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಅಡಿಯೋ ಲಾಂಚ್ ಮಾಡಲಾಗುವುದು ಎಂದು ಧ್ರುವ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ