ಧ್ರುವ ಸರ್ಜಾ ಆರನೇ ಸಿನಿಮಾ ಇಂದು ಅನೌನ್ಸ್

ಮಂಗಳವಾರ, 24 ಆಗಸ್ಟ್ 2021 (09:10 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಇಂದು ಮತ್ತೊಂದು ಸಿನಿಮಾ ಘೋಷಣೆಯಾಗಲಿದೆ.


ಮೊನ್ನೆಯಷ್ಟೇ ಧ್ರುವ ಎ.ಪಿ. ಅರ್ಜುನ್ ನಿರ್ದೇಶನದಲ್ಲಿ ‘ಮಾರ್ಟಿನ್’ ಸಿನಿಮಾ ಲಾಂಚ್ ಕಾರ್ಯಕ್ರಮ ಮುಗಿಸಿಕೊಂಡಿದ್ದರು. ಇದೀಗ ಆರನೇ ಸಿನಿಮಾ ಲಾಂಚ್ ಆಗಲಿದೆ. ಇಂದು ತಮ್ಮ ಮುಂದಿನ ಚಿತ್ರ ಯಾವುದು ಎಂಬುದನ್ನು ಧ್ರುವ ಬಹಿರಂಗಪಡಿಸಿದ್ದಾರೆ.

ಈಗಾಗಲೇ ಧ್ರುವ-ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಹಾಗಿದ್ದರೆ ಇಂದು ಇದುವೇ ಧ‍್ರುವರ 6 ನೇ ಸಿನಿಮಾವಾಗಿರಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ