ಮೊದಲ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ-ಪ್ರೇರಣಾ ದಂಪತಿಗೆ ಶುಭಾಶಯಗಳ ಸುರಿಮಳೆ
ಇದರ ಬೆನ್ನಲ್ಲೇ ಇಬ್ಬರಿಗೂ ಸ್ಯಾಂಡಲ್ ವುಡ್ ಸ್ನೇಹಿತರು, ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈಯುತ್ತಿದ್ದಾರೆ. ತುಂಬು ಗರ್ಭಿಣಿ ಪ್ರೇರಣಾ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡಿರುವ ಧ್ರುವ ತಮ್ಮ ಜೀವನದ ಮಹತ್ವದ ಘಟ್ಟಕ್ಕೆ ಕಾಲಿಡುತ್ತಿದ್ದೇವೆ. ನಿಮ್ಮ ಹಾರೈಕೆಯಿರಲಿ ಎಂದಿದ್ದಾರೆ.
ಸೆಪ್ಟೆಂಬರ್ ನಲ್ಲಿ ಇಬ್ಬರ ಪ್ರೀತಿಯ ಕೂಸು ಮಡಿಲು ಸೇರಲಿದೆ. ಇನ್ನು, ಧ್ರುವ ಈ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೇ ಅತ್ತಿಗೆ ಮೇಘನಾ ರಾಜ್ ಕೂಡಾ ಸಂತಸ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದು, ಇದು ಅತ್ಯಂತ ಸಂತೋಷದ ವಿಷಯ ಎಂದಿದ್ದಾರೆ.