ಜೂಜಾಟವಾಡಿ ಸಿಕ್ಕಿಬಿದ್ದ ನಟ ಮಹೇಶ್ ಬಾಬು?!

ಸೋಮವಾರ, 6 ನವೆಂಬರ್ 2023 (08:40 IST)
ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕಾರ್ಯಕ್ರಮವೊಂದರಲ್ಲಿ ಜೂಜಾಟವಾಡಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಇದೀಗ ಅವರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಮಹೇಶ್ ಬಾಬು ಜೊತೆಗೆ ವಿಕ್ಟರಿ ವೆಂಕಟೇಶ್ ಕೂಡಾ ಇದ್ದರು. ಕಾರ್ಯಕ್ರಮವೊಂದರಲ್ಲಿ ಸಹಚರರ ಜೊತೆ ಕುಳಿತು ಹಣವಿಟ್ಟು ಇಸ್ಪೀಟು ಆಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಣವಿಟ್ಟು ಇಸ್ಪೀಟು ಆಡುತ್ತಿರುವ ನಟರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದ್ದಾರೆ.  ಕ್ಲಬ್ ಒಂದರ ಉದ್ಘಾಟನೆಗೆಂದು ಹೋಗಿದ್ದಾಗ ಈ ಘಟನೆಯಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ