‘ನಟಸಾರ್ವಭೌಮ’ ಚಿತ್ರದ ಶೂಟಿಂಗ್ ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ಯಾಕೆ?

ಸೋಮವಾರ, 16 ಜುಲೈ 2018 (09:16 IST)
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ  ಹಿಂದೊಮ್ಮೆ ನಾಯಕಿಯ ವಿಷಯದಲ್ಲಿ ಬಾರೀ ವಿರೋಧ ವ್ಯಕ್ತವಾಗಿತ್ತು, ಆದರೆ ಇದೀಗ ಈ ಚಿತ್ರದ ಚಿತ್ರೀಕರಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ.


ಹೌದು. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಟಸಾರ್ವಭೌಮ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಬಾಗಲಕೋಟೆಯ ಐತಿಹಾಸಿಕ ಮಹಾಕೋಟೇಶ್ವರ ಪುಷ್ಕರಣಿಯಲ್ಲಿ ನಡೆಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಈ ಸ್ಥಳದಲ್ಲಿ ಚಿತ್ರೀಕರಣ‌ ಮಾಡಬಾರದೆಂದು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


ಕಾರಣ ಸೆಟ್ ನಿರ್ಮಿಸಿಲು ಈ ಪುಷ್ಕರಣಿಯಲ್ಲಿ ಹಳ್ಳ ತೋಡಿದ್ದು, ಇದರಿಂದ ಅಂತರ್ಜಲ ಬತ್ತುವ ಸಾಧ್ಯತೆ ಇದೆ. ಕರ್ನಾಟಕದಲ್ಲಿರುವ ಈ ಪವಿತ್ರ ಸ್ಥಳವನ್ನ ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ.  ಮಹಾಕೂಟದಲ್ಲಿನ ಈ ಪುಷ್ಕರಣಿಯಲ್ಲಿ ಎಂದಿಗೂ ಅಂತರ್ಜಲ ಬತ್ತಿಲ್ಲ . ಆದರೆ ಚಿತ್ರೀಕರಣಕ್ಕೆ ನಿರ್ಮಿಸಿರುವ ಸೆಟ್ ನಿಂದ ಅಂತರ್ಜಲ ಬತ್ತುವ ಭೀತಿಯಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ