ನಿರ್ದೇಶಕ ಪವನ್ ಕುಮಾರ್ ಗೆ ಕೊರೋನಾ ಪಾಸಿಟಿವ್

ಬುಧವಾರ, 18 ಆಗಸ್ಟ್ 2021 (10:10 IST)
ಬೆಂಗಳೂರು: ಲೂಸಿಯಾ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ.
Photo Courtesy: Twitter


ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ದ್ವಿತ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಪವನ್ ಗೆ ಕೊರೋನಾ ಶಾಕ್ ನೀಡಿದೆ.

ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಎಕ್ಸ್ ರೇ ಫೋಟೋ ಪ್ರಕಟಿಸಿರುವ ಪವನ್ ತಮಗೆ ಕೊರೋನಾ ದೃಢಪಟ್ಟಿರುವ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ