ನಾಯಕಿಯನ್ನು ವೇದಿಕೆಯಲ್ಲಿ ಮುಜುಗರಕ್ಕೀಡು ಮಾಡಿದ ನಿರ್ದೇಶಕ ಸುಶೀಂದ್ರನ್

ಗುರುವಾರ, 7 ಜನವರಿ 2021 (11:21 IST)
ಚೆನ್ನೈ : ತಮಿಳು ಖ್ಯಾತ ನಿರ್ದೇಶಕ ಸುಶೀಂದ್ರನ್ ನಾಯಕಿಯನ್ನು ವೇದಿಕೆಯಲ್ಲಿ ಮುಜುಗರಕ್ಕೀಡು ಮಾಡುವುದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವಿವಾದಕ್ಕೆ ಒಳಗಾಗಿದ್ದಾರೆ.  

ನಟ ಸಿಂಬು ನಾಯಕನಾಗಿ ನಟಿಸಿರುವ ‘ಈಶ್ವರನ್’ ಚಿತ್ರದ ಆಡಿಯೋ ಬಿಡುಗಡೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಾಯಕಿ ನಿಧಿ ಅಗರ್ವಾಲ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ , ಪಕ್ಕದಲ್ಲಿದ್ದ ನಿರ್ದೇಶಕ ಸುಶೀಂದ್ರನ್ ಸಿಂಬು ಮಾಮಾ ಐ ಲವ್ ಯು ಎಂದು ಸಲಹೆ ನೀಡಿದ್ದಾರೆ. ಇದು ನಾಯಕಿಯನ್ನು ಮುಜುಗರಕ್ಕೀಡು ಮಾಡಿದೆ.ಈ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿದ ನಿರ್ದೇಶಕ ಸುಶೀಂದ್ರನ್ ಸಿನಿಮಾದಲ್ಲಿರುವಂತೆ ತಮಾಷೆ ಮಾಡಲು ಈ ರೀತಿಯಾಗಿ ಹೇಳಿದೆ ವಿನಃ ಬೇರೆ ಯಾವುದೇ ಕೆಟ್ಟ ಉದ್ದೇಶಗಳಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಯಾರಿಗಾದರೂ ಮನನೊಂದಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ