ತೆಲುಗಿನಲ್ಲಿ ದೃಶ್ಯಂ 2 ಮಾಡುತ್ತಾರಾ? ಈ ಬಗ್ಗೆ ನಟ ವೆಂಕಟೇಶ್ ಹೇಳಿದ್ದೇನು?
ಬುಧವಾರ, 10 ಫೆಬ್ರವರಿ 2021 (12:37 IST)
ಹೈದರಾಬಾದ್ : 2014ರಲ್ಲಿ ಬಿಡುಗಡೆಯಾದ ತೆಲುಗು ದೃಶ್ಯಂ ಚಿತ್ರ ಸೂಪರ್ ಹಿಟ್ ಆಗಿತ್ತು. ಇದರಲ್ಲಿ ನಟ ವೆಂಕಟೇಶ್, ನಟಿ ಮೀನಾ ಅವರು ನಟಿಸಿದ್ದರು.
ಆದರೆ ಇದೀಗ ಮಲಯಾಳಂನಲ್ಲಿ ಮೋಹನ್ ಲಾಲ್ ಅಭಿನಯದ ದೃಶ್ಯಂ 2 ಚಿತ್ರ ರೆಡಿಯಾಗುತ್ತಿದೆ. ಇದು ಫೆಬ್ರವರಿ 19ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ನಡುವೆ ತೆಲುಗಿನಲ್ಲಿ ದೃಶ್ಯಂ 2 ಚಿತ್ರ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ನಟ ವೆಂಕಟೇಶ್ ಅವರು ಮಲಯಾಳಂ ಚಿತ್ರವನ್ನು ನೋಡಿದ ನಂತರ ಪ್ರೇಕ್ಷಕರಿಗೆ ಮತ್ತೆ ತೆಲುಗು ರಿಮೇಕ್ ನೋಡುವ ಕುತೂಹಲವಿರುವುದಿಲ್ಲ ಎಂದು ತಿಳಿಸಿದ್ದಾರೆ . ಹಾಗಾಗಿ ತೆಲುಗಿನಲ್ಲಿ ದೃಶ್ಯಂ 2 ಬರುವುದು ಡೌಟ್ ಎನ್ನಲಾಗಿದೆ.