ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಕುಕನೂರಿನ ಗುದ್ನೇಶ್ವರ ಸ್ವಾಮಿಯ ಮಹಾರಥೋತ್ಸವ ಡಿ.13 ರಂದು ಸಂಜೆ 04 ಗಂಟೆಗೆ ನೆರವೇರಲಿದ್ದು, ಇದರ ಅಂಗವಾಗಿ ಜರುಗಲಿರುವ ಜೀ-ಕನ್ನಡ ವಾಹಿನಿಯ ಸರಿಗಮಪ ದಲ್ಲಿ ಖ್ಯಾತಿ ಗಳಿಸಿದ ಗಾಯಕರು, ಡ್ರಾಮಾ ಜೂನಿಯರ್ ಲಿಟ್ಲ್‍ಚಾಂಪ್ಸ್ ಮಕ್ಕಳ ಮನರಂಜನೆಯಂತಹ ಆಕರ್ಷಕ ಕಾರ್ಯಕ್ರಮಗಳು ಇವೆ.
ಡಿ. 16 ರಂದು ಜೀ ಟಿವಿ ಕನ್ನಡ ವಾಹಿನಿಯ ಸರಿಗಮಪ ಸೀಜನ್ 11 ನ ಖ್ಯಾತ ಗಾಯಕರುಗಳಾದ ಶ್ರೀರಾಮ ಕಾಸರ್, ಅಬ್ದುಲ್ ಖಾದರ್ (ನೈಜೀರಿಯ), ಸಹನಾ ಭಾರದ್ವಾಜ, ನಿತ್ಯಾ ಅನಂತಪೂರ ಇವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.