ಅಮ್ಮನ ಕಳೆದುಕೊಂಡ ಬೆನ್ನಲ್ಲೇ ದುನಿಯಾ ವಿಜಯ್ ಭಾವುಕ ಮಾತು

ಶುಕ್ರವಾರ, 9 ಜುಲೈ 2021 (09:20 IST)
ಬೆಂಗಳೂರು: ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ನಿನ್ನೆ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.


ಬ್ರೈನ್ ಸ್ಟ್ರೋಕ್ ನಿಂದಾಗಿ ಹಾಸಿಗೆ ಹಿಡಿದಿದ್ದ ನಾರಾಯಣಮ್ಮನಿಗೆ ಕಳೆದ 20 ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹಾಗಿದ್ದರೂ ಅವರ ಸ್ಥಿತಿ ಸುಧಾರಿಸಿರಲಿಲ್ಲ. ಇತ್ತೀಚೆಗೆ ವಿಜಯ್ ತಮ್ಮ ಅಮ್ಮ ಇನ್ನು ಹೆಚ್ಚು ದಿನ ಬದುಕಲ್ಲ ಎಂದಿದ್ದರು.

ತಾಯಿ ನಿಧನರಾದ ದುಃಖದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದುಕೊಂಡಿರುವ ‘ಅಮ್ಮ ಮತ್ತೆ ಹುಟ್ಟಿ ಬಾ’ ಎಂದು ತಾಯಿ ಜೊತೆಗಿನ ಸುಂದರ ಕ್ಷಣವೊಂದರ ಫೋಟೋವೊಂದನ್ನು ಪ್ರಕಟಿಸಿ ಭಾವುಕರಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ