ಕಾಮೆಡಿಯನ್ ಕಪಿಲ್ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲು

ಸೋಮವಾರ, 19 ಸೆಪ್ಟಂಬರ್ 2016 (17:59 IST)
ಸ್ಟಾರ್ ಕಾಮೆಡಿಯನ್ ಕಪಿಲ್ ಶರ್ಮಾ ವಿರುದ್ಧ ಪರಿಸರ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ವರ್ಸೋವಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
 
ಕಪಿಲ್ ಶರ್ಮಾ ಸರಕಾರಿ ಭೂಮಿ ಕಬಳಿಸಿ ಕಟ್ಟಡದ ಮನೆಯ ಹಿಂಬಾಗದಲ್ಲಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 
 
ಮುಂಬೈನ ಸಬ್‌ ಅರ್ಬನ್ ಜಿಲ್ಲಾಧಿಕಾರಿ ದಿಪೇಂದ್ರ ಸಿಂಗ್ ಖುಶ್ವಾ, ಶರ್ಮಾ ಪರಿಸರ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
 
ಕಪಿಲ್ ಶರ್ಮಾ ಪರಿಸರ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದ್ದರಿಂದ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರ ಡಿಸಿಪಿ ಅಶೋಕ್ ದುಢೆ ತಿಳಿಸಿದ್ದಾರೆ.
 
ಕಳೆದ ನವೆಂಬರ್ ತಿಂಗಳಲ್ಲಿ ಅಂಧೇರಿ (ಪಶ್ಚಿಮ) ಮಹಾಡ್ ಕಾಲೋನಿಯಲ್ಲಿ ಕಪಿಲ್ ಶರ್ಮಾ ಉದ್ಯಮಿಯೊಬ್ಬರಿಂದ ಬಂಗಲೆಯನ್ನು ಖರೀದಿಸಿದ್ದರು. ನಂತರ ನವೀಕರಣ ಮಾಡಿದ್ದರು. ಮನೆ ನವೀಕರಣ ಮಾಡುವ ಸಂದರ್ಭದಲ್ಲಿ ಪರಿಸರ ಕಾಯ್ದೆ ಉಲ್ಲಂಘಿಸಿ ಭೂಕಬಳಿಕೆ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ