ಈ ಮೂರು ಶುಕ್ರವಾರ ಕನ್ನಡ ಸಿನಿಮಾ ರಂಗಕ್ಕೆ ಸ್ಪೆಷಲ್ ಡೇ
ಇನ್ನು ಇದೇ ದಿನ ಮಹಿಳಾ ಪ್ರಧಾನ ಚಿತ್ರ ರಂಗನಾಯಕಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾದಲ್ಲಿ ಅದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ಮತ್ತೊಂದು ವಿಶೇಷವೆಂದರೆ ಇದೇ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಒಡೆಯ ಸಿನಿಮಾ ಬಗ್ಗೆ ದರ್ಶನ್ ಅಭಿಮಾನಿಗಳಲ್ಲಿ ಸಾಕಷ್ಟು ಕಾತುರತೆಯಿದೆ. ಈ ಸಿನಿಮಾದ ಲುಕ್ ಕೂಡಾ ಕುತೂಹಲಕಾರಿಯಾಗಿದೆ. ಹೀಗಾಗಿ ಟೀಸರ್ ಹೇಗಿರಬಹುದು ಎಂಬುದಕ್ಕೆ ಇದೇ ದಿನ ಉತ್ತರ ಸಿಗಲಿದೆ.