ಮೂಲಗಳ ಪ್ರಕಾರ, ಗಣೇಶ್ ಅವರು ರೂ.75 ಲಕ್ಷ ಪರಿಹಾರಧನ ಕೊಡಬೇಕೆಂದು ನಾರಾಯಣ್‌ಗೆ ನೋಟೀಸ್ ರವಾನಿಸಿದ್ದಾರೆ. ಜಾಹೀರಾತೊಂದರಲ್ಲಿ ತಮ್ಮ ಅನುಮತಿ ಇಲ್ಲದೆ ತನ್ನ ಫೋಟೋ ಬಳಸಿಕೊಂಡಿದ್ದಾರೆ ಎಂಬುದು ಗಣೇಶ್ ಆರೋಪ. ಇದಕ್ಕೆ ತಮಗೆ ಯಾವುದೇ ಹಣ ಸಂದಾಯವಾಗಿಲ್ಲ ಎಂದು ಅವರು ನೋಟೀಸಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿ ನೋಟೀಸ್ ಕಳುಹಿಸಿರುವ ಎಸ್ ನಾರಾಯಣ್, ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದಿದ್ದು, ಮಾನಹಾನಿಯಾಗಿದೆ ಎಂದು ಆರೋಪಿ ರೂ.10 ಕೋಟಿ ಪರಿಹಾರಧನಕ್ಕೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ನೋಟೀಸು ಪ್ರತಿ ನೋಟೀಸುಗಳಿಂದ ಸುದ್ದಿಯಾಗಿದ್ದಾರೆ.