ಥಿಯೇಟರ್ ನಲ್ಲಿ ಇಂದಿನಿಂದ ಘೋಸ್ಟ್, ಲಿಯೋ ಅಬ್ಬರ
ಎರಡೂ ಸಿನಿಮಾಗಳೂ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳ ಪೈಕಿ ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.
ಈಗಾಗಲೇ ಅಡ್ವಾನ್ಸ್ ಬುಕಿಂಗ್ ನಲ್ಲಿ ಲಿಯೋ ಸಿನಿಮಾ ಮುಂದಿದೆ. ಹೀಗಾಗಿ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ವಿಜಯ್ ಸಿನಿಮಾ ಘೋಸ್ಟ್ ಸಿನಿಮಾವನ್ನು ಹಿಂದಿಕ್ಕಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಹಾಗಿದ್ದರೂ ಜೈಲರ್ ಸಿನಿಮಾ ಬಳಿಕ ಶಿವಣ್ಣನಿಗೆ ಪರಭಾಷೆಗಳಲ್ಲೂ ಅಭಿಮಾನಿಗಳು ಹೆಚ್ಚಾಗಿದ್ದು, ಘೋಸ್ಟ್ ನೋಡಲು ಜನ ಥಿಯೇಟರ್ ಗೆ ಬರಬಹುದು ಎಂಬ ವಿಶ್ವಾಸವಿದೆ. ಎರಡೂ ಮಾಸ್ ಸಿನಿಮಾಗಳ ಥಿಯೇಟರ್ ಕದನಕ್ಕೆ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ.