ಡಾ.ರಾಜ್ ಫೋಟೋ ಎಡವಟ್ಟು ಸರಿಪಡಿಸಿಕೊಂಡ ಗೂಗಲ್

ಶುಕ್ರವಾರ, 25 ಜೂನ್ 2021 (18:35 IST)
ಬೆಂಗಳೂರು: ತಮಿಳು ಸಿನಿಮಾವೊಂದರ ಪಾತ್ರ ವರ್ಗದಲ್ಲಿ ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಫೋಟೋ ಪ್ರಕಟಿಸಿ ಅವಮಾನಿಸಿದ್ದ ಗೂಗಲ್ ಈಗ ತಪ್ಪು ಸರಿಪಡಿಸಿಕೊಂಡಿದೆ.


ತಮಿಳು ಸಿನಿಮಾ ವಿಕ್ರಂ ವೇದ ಎಂದು ಸರ್ಚ್ ಕೊಟ್ಟರೆ ಪಾತ್ರವರ್ಗದವರ ಲಿಸ್ಟ್ ನಲ್ಲಿ ಅಣ್ಣಾವ್ರ ಫೋಟೋ ಜೊತೆಗೆ ಹಾಫ್ ಬಾಯ್ಲ್ ಎಂದು ಪಾತ್ರದ ಹೆಸರನ್ನು ನಮೂದಿಸಲಾಗಿತ್ತು. ಇದರ ಬಗ್ಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ಕೊನೆಗೂ ಕನ್ನಡಿಗರ ಆಕ್ಷೇಪಕ್ಕೆ ಮಣಿದ ಗೂಗಲ್ ತಪ್ಪು ಸರಿಪಡಿಸಿಕೊಂಡಿದ್ದು, ಅಣ್ಣಾವ್ರ ಫೋಟೋ ತೆಗೆದು ಆ ಜಾಗದಲ್ಲಿ ಸರಿಯಾದ ಪಾತ್ರಧಾರಿಯ ಹೆಸರನ್ನು ಪ್ರಕಟಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ