ನಟಿ ಹನ್ಸಿಕಾ ಮೋಟ್ವಾನಿ ಸೆಟ್ಸ್‌ನಲ್ಲಿ ಫುಲ್ ಟೈಟ್

ಶನಿವಾರ, 4 ಫೆಬ್ರವರಿ 2017 (11:38 IST)
ಈ ಕಿಕ್ ವಿಚಾರನ್ನು ಸ್ವತಃ ಹನ್ಸಿಕಾ ಮೋಟ್ವಾನಿಯೇ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ವಿಷಯ ಏನಪ್ಪಾ ಅಂದ್ರೆ.. ಮೊಟ್ಟ ಮೊದಲ ಬಾರಿಗೆ ತಾನು ಎಣ್ಣೆ ಹೊಡೆದು ಫುಲ್ ಟೈಟ್ ಆಗಿ ಸೆಟ್‌ನಲ್ಲಿ ನಾನಾ ರಾದ್ಧಾಂತ ಮಾಡಿದೆ ಎಂದು ಹನ್ಸಿಕಾ ಹೇಳಿಕೊಂಡಿದ್ದಾರೆ. ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡುಬೀರಿ ಎಂಬಂತಾಗಿದೆ.
 
ಫುಲ್ ಟೈಟ್ ಆದ ಹನ್ಸಿಕಾರನ್ನು ಕಂಟ್ರೋಲ್ ಮಾಡಕ್ಕೆ ಸೆಟ್‌ನಲ್ಲಿದ್ದರು ಹರಸಾಹಸ ಪಡಬೇಕಾಯಿತಂತೆ. ’ಬೋಗನ್’ ಎಂಬ ಚಿತ್ರದ ಪ್ರಚಾರ ಸಂದರ್ಭದಲ್ಲಿ ಹನ್ಸಿಕಾ ಕುಡಿದ ವಿಚಾರನ್ನು ಹೊರಹಾಕಿದ್ದಾರೆ. ಆದರೆ ಪಾತ್ರಕ್ಕಾಗಿ ಈ ರೀತಿ ಮಾಡಬೇಕಾಯಿತು. ಇದೇ ಮೊದಲ ಬಾರಿಗೆ ತಾನು ಗುಂಡು ಹಾಕಿದ್ದು ಎಂದಿದ್ದಾರೆ.
 
ಕಿಕ್ ಇರುವ ಆ ಸನ್ನಿವೇಶವನ್ನು ಸುಮಾರು 10 ದಿನಗಳ ಕಾಲ ಚಿತ್ರೀಕರಿಸಲಾಯಿತಂತೆ. ಬೋಗನ್ ಈಗಷ್ಟೇ ಚಿತ್ರ ತೆರೆಕಂಡಿದ್ದು, ಒಳ್ಳೆಯ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆಯಂತೆ. ಪಾತ್ರಕ್ಕಾಗಿ ಎಣ್ಣೆ ಹೊಡೆಯಲು ರೆಡಿ ಎನ್ನುತ್ತಿದ್ದಾರೆ ಈಗಿನ ಜಮಾನಾ ನಾಯಕಿಯರು ಎಂಬಂತಾಯಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ