ಕನ್ನಡದಲ್ಲಿ ಬರೀರಿ ಮ್ಯಾಡಂ ಅನ್ನೋರಿಗೆ ಪತ್ರ ಬರೆದು ಉತ್ತರ ಕೊಟ್ಟ ನಟಿ ಹರಿಪ್ರಿಯಾ

ಸೋಮವಾರ, 5 ಆಗಸ್ಟ್ 2019 (09:50 IST)
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕನ್ನಡ ಭಾಷೆ ವಿಚಾರವಾಗಿ ಸಿನಿಮಾ ನಟ, ನಟಿಯರು ಟ್ರೋಲ್ ಗೊಳಗಾಗುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ಹರಿಪ್ರಿಯಾ ತಮ್ಮ ಕನ್ನಡಾಭಿಮಾನವನ್ನು ಪತ್ರದ ಮೂಲಕ ಬರೆದು ತೋರಿಸಿದ್ದಾರೆ.


ಆಗಾಗ ತಮಗೆ ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿ ಬರೆಯಿರಿ ಎಂದೆಲ್ಲಾ ಕಾಮೆಂಟ್ ಮಾಡುವ ಅಭಿಮಾನಿಗಳಿಗೆ ಸುದೀರ್ಘವಾಗಿ ತಮ್ಮದೇ ಕೈ ಬರಹದಲ್ಲಿ ಪತ್ರ ಬರೆದು ಅದನ್ನು ಟ್ವೀಟ್ ಮಾಡಿದ್ದಾರೆ.

‘ನನಗೆ ಕನ್ನಡ ಓದಲು ಬರೆಯಲು ಬರುತ್ತದೆ. ಕನ್ನಡದಲ್ಲಿ ಉತ್ತಮ ಅಂಕಗಳಿಸುತ್ತಿದ್ದೆ. ಕನ್ನಡ ಭಾಷೆ, ಭಾಷಾಭಿಮಾನಿಗಳ ಬಗ್ಗೆ ಅಪಾರ ಗೌರವ, ಪ್ರೇಮ ಅಭಿಮಾನವಿದೆ. ನನಗೆ ಬೇರೆ ಭಾಷೆಯಲ್ಲೂ ಅಭಿಮಾನಿಗಳಿರುವ ಕಾರಣ ಆಂಗ್ಲ ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇನೆ. ನನ್ನ ಮೇಲಿನ ಅಭಿಮಾನ ಪ್ರೀತಿ ಸದಾ ಹೀಗೇ ಇರಲಿ’ ಎಂದು ಸುದೀರ್ಘವಾಗಿ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ. ಹರಿಪ್ರಿಯಾ ಪತ್ರಕ್ಕೆ ನೂರಾರು ಜನ ಕಾಮೆಂಟ್ ಮಾಡಿದ್ದು, ಅವರ ಕನ್ನಡಾಭಿಮಾನವನ್ನು ಮೆಚ್ಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ