ಕಪ್ಪದ ಡೈರಿ ಎಸ್ಐಟಿ ತನಿಖೆಗೆ ಹೈಕೋರ್ಟ್ ನಕಾರ

ಸೋಮವಾರ, 6 ಮಾರ್ಚ್ 2017 (16:23 IST)
ಬೆಂಗಳೂರು(ಮಾ.06): ಕಾಂಗ್ರೆಸ್ ಹೈಕಮಾಂಡ್`ಗೆ ಕಪ್ಪ ನೀಡಿದ ಮಾಹಿತಿ ಇದೆ ಎನ್ನಲಾದ ಡೈರಿ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಸೀಕ್ರೆಟ್ ಡೈರಿ ಕುರಿತು ಎಸ್`ಐಟಿ ತನಿಖೆಗೆ ಕೋರಿ ಪತ್ರಕರ್ತ ಹಮೀದ್ ಪಾಳ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.

ಐಟಿ ಮತ್ತು ಜಾರಿನಿರ್ದೇಶನಾಲಯದ ಅಧಿಕಾರಿಗಳು ಎಂಎಲ್`ಸಿ ಗೋವಿಂದರಾಜು ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಸಿಕ್ಕಿದೆ ಎನ್ನಲಾದ ಡೈರಿ ರಾಷ್ಟ್ರೀಯ ಮಾಧ್ಯಮದಲ್ಲಿ ಬಹಿರಂಗಗೊಂಡಿತ್ತು. ಡೈರಿಯಲ್ಲಿ ಸ್ಟೀಲ್ ಫ್ಲೈಓವರ್ ಮತ್ತು ಇನ್ಷಿಯಲ್`ಗಳ ಮೂಲಕ ಹೆಸರುಗಳನ್ನ ಸೂಚಿಸಿ ಹಣ ಕೊಟ್ಟ ಮತ್ತು ಪಡೆದ ರೀತಿ ಬರೆಯಲಾಗಿತ್ತು. ಇನ್ಷಿಯಲ್`ಗಳ ಮುಂದೆ ಕೋಟಿ ಕೋಟಿ ಹಣವನ್ನೂ ಸೂಚಿಸಿದ್ದರಿಂದ ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.

ಈ ಕುರಿತಂತೆ ಎಸ್`ಐಟಿ ತನಿಖೆಗೆ ಕೋರಿ ಪತ್ರಕರ್ತ ಹಮೀದ್ ಪಾಳ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಐಟಿ ತನಿಖೆ ನಡೆಯುತ್ತಿರುವುದರಿಂದ ಎಸ್`ಐಟಿ ತನಿಖೆಗೆ ಕೋರ್ಟ್ ನಿರಾಕರಿಸಿದೆ.

ವೆಬ್ದುನಿಯಾವನ್ನು ಓದಿ