ಬಾಹುಬಲಿ ಚಿತ್ರಕ್ಕೆ ಪೈಪೋಟಿ ನೀಡಲು ಅದೇ ದಿನ ಹುಚ್ಚ ವೆಂಕಟ್ ಸಿನಿಮಾ ರಿಲೀಸ್!

ಶನಿವಾರ, 22 ಏಪ್ರಿಲ್ 2017 (11:54 IST)
ಬೆಂಗಳೂರು: ಹುಚ್ಚ ವೆಂಕಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಬಹುನಿರೀಕ್ಷಿತ ಬಾಹುಬಲಿ ಚಿತ್ರ ಏಪ್ರಿಲ್ 28 ಕ್ಕೆ ಬಿಡುಗಡೆಯಾಗುತ್ತಿದೆ. ಅದೇ ದಿನ ತಮ್ಮ ಚಿತ್ರವನ್ನೂ ಬಿಡುಗಡೆ ಮಾಡಲು ಹುಚ್ಚ ವೆಂಕಟ್ ತೀರ್ಮಾನಿಸಿದ್ದಾರಂತೆ.

 
ಎಲ್ಲರೂ ಬಾಹುಬಲಿ 2 ಸಿನಿಮಾ ಬಿಡುಗಡೆ ದಿನ ತಮ್ಮ ಚಿತ್ರ ಬಿಡುಗಡೆ ಮಾಡಲು ಭಯಪಟ್ಟರೆ, ಹುಚ್ಚ ವೆಂಕಟ್ ಮಾತ್ರ ಅದೇ ದಿನ ತಮ್ಮ ‘ಪೊರ್ಕಿ ಹುಚ್ಚ ವೆಂಕಟ್’ ಸಿನಿಮಾ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ.

ಅವರ ಹಿಂದಿನ ಚಿತ್ರದಂತೆ ಈ ಸಿನಿಮಾದಲ್ಲೂ ನಿರ್ದೇಶನದಿಂದ ಹಿಡಿದು ಎಲ್ಲಾ ಪಾತ್ರವೂ ಅವರದ್ದೇ. ಸತೀಶ್ ಬಾಬು ಸಂಗೀತ ನಿರ್ದೇಶಕ. ವೆಂಕಟ್ ಒಂದು ಹಾಡನ್ನೂ ಹಾಡಿದ್ದಾರೆ ಎನ್ನುವುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ