ನಾನು ಬಡವ, ಮುಗ್ಧ ಅಲ್ಲಿಲ್ಲ, ಮೊಸಳೆ ಕಣ್ಣೀರು ಹಾಕಲಿಲ್ಲ: ಇದೇ ಹನುಮಂತು ಗೆಲುವಿನ ಗುಟ್ಟು

Sampriya

ಸೋಮವಾರ, 27 ಜನವರಿ 2025 (16:11 IST)
Photo Courtesy X
ಗಾಯಕ ಹನುಮಂತು ಬಿಗ್‌ಬಾಸ್ ಸೀಸನ್ 11ರ ಟ್ರೋಫಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದೀಗ ಹನುಮಂತು ಪಡೆದ ವೋಟ್ ಹೊಸ ದಾಖಲೆ ನಿರ್ಮಿಸಿದೆ. ಬರೋಬ್ಬರಿ 5ಕೋಟಿ 23ಲಕ್ಷ 89ಸಾವಿರದ 318 ವೋಟ್ ಪಡೆದು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಹಳ್ಳಿ ಹೈದನೊಬ್ಬ ಈ ರೀತಿಯ ವೋಟ್ ಪಡೆದಿರುವುದು ಶಾಕಿಂಗ್ ಆಗಿದೆ. ವೈಲ್ಡ್ ಕಾರ್ಡ್‌ ಆಗಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಹನುಮಂತು ಆರಂಭದಿಂದಲೂ ತನ್ನ ನೇರ ಮಾತು ಹಾಗೂ ಮುಗ್ಥತೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದರು.

ಟಾಸ್ಕ್ ಮೂಲಕ ಫಿನಾಲೆ ಟಿಕೆಟ್ ಪಡೆದು ಹನುಮಂತು ನೇರವಾಗಿ ಫಿನಾಲೆಗೆ ಕಾಲಿಟ್ಟಿದ್ದರು.  ಹನುಮಂತುವಿನಲ್ಲಿದ್ದ ಮುಗ್ಥತೆ, ಗುರಿ ಮೇಲಿನ ದೃಢ ನಿರ್ಧಾರ ಎಲ್ಲರ ಮನಸ್ಸು ಗೆದ್ದಿತ್ತು.

ಹನುಮಂತು ಗೆಲುವನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಅವರ ಅಭಿಮಾನಿಗಳು, ನಾನು ಬಡವ ಅಲ್ಲಿಲ್ಲ, ಮೊಸಳೆ ಕಣ್ಣೀರು ಹಾಕಲಿಲ್ಲ, ಮುಗ್ದ ಎಂದು ಹೇಳಲಿಲ್ಲ, ನನ್ನ ಆಟ ಶುರು ಮಾಡಿದ್ದೇನಿ ಎಂದು ನೇರವಾಗಿ ಹೇಳಿದ.

ಈ ವ್ಯಕ್ತಿತ್ವನೇ ಗೆಲುವು ತಂದುಕೊಟ್ಟಿತು ಎಂದು ಕಮೆಂಟ್ ಮಾಡುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ