ದಿವಂಗತ ನಟರೊಬ್ಬರ ಜೀವನಚರಿತ್ರೆಯಲ್ಲಿ ನಟಿಸುತ್ತಾರಾ ರಾಣಾ ದಗ್ಗುಬಾಟಿ?

ಮಂಗಳವಾರ, 13 ಅಕ್ಟೋಬರ್ 2020 (08:38 IST)
ಹೈದರಾಬಾದ್ : ದಿವಂಗತ ನಟ ಶೋಭನ್ ಬಾಬು ಅವರ  ಜೀವನಚರಿತ್ರೆಯನ್ನು ಸಿನಿಮಾ ಮಾಡುವ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು. ಆದರೆ ಇದೀಗ ನಿರ್ಮಾಪಕರು  ಶೋಭನ್ ಬಾಬು ಅವರ ಪಾತ್ರದ ನಿರ್ವಹಿಸುವ ನಟನ ಆಯ್ಕೆಯಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಹೌದು. ಇತ್ತೀಚಿನ ವರದಿ ಪ್ರಕಾರ ನಟ ಶೋಭನ್ ಬಾಬು ಅವರ ಬಯೋಪಿಕ್ ಸಿನಿಮಾದಲ್ಲಿ ಶೋಭನ್ ಪಾತ್ರದಲ್ಲಿ ನಟಿಸಲು ನಟ ರಾಣಾ ದಗ್ಗುಬಾಟಿ ಅವರನ್ನು ಪರಿಗಣಿಸಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಈಗಾಗಲೇ ರಾಣಾ ದಗ್ಗುಬಾಟಿ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹಾಗೇ ಈ ಸಿನಿಮಾ ಎರಡು ಭಾಷೆಗಳಲ್ಲಿ ಮೂಡಿಬರಬಹುಉದ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ