ನಾಲ್ವರು ಭಾರತೀಯರನ್ನು ಅಪಹರಿಸಿದ ಐಸಿಸ್ ಉಗ್ರರು

ಶುಕ್ರವಾರ, 31 ಜುಲೈ 2015 (11:14 IST)
ಈ ಹಿಂದೆ ಸಿರಿಯಾ, ಇರಾನ್ ಮತ್ತು ಇರಾಕ್ ಪ್ರಜೆಗಳನ್ನು ಅಪಹರಿಸಿ ಕತ್ತು ಕತ್ತರಿಸುವ ಹೀನ ಕೃತ್ಯಕ್ಕೆ ಕೈ ಹಾಕಿ ಭಯ ಸೃಷ್ಟಿಸಿದ್ದ ಉಗ್ರ ಸಂಘಟನೆ ಪ್ರಸ್ತುತ ಲಿಬಿಯಾದ ಟ್ರಿಪೊಲಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಲ್ವರು ಭಾರತೀಯರನ್ನು ಅಪಹರಿಸಿದ್ದಾರೆ.
 
ಹೌದು, ಅಪಹರಣಕ್ಕೊಳಗಾಗಿರುವ ಈ ನಾಲ್ವರು ಭಾರತೀಯರು ದೇಶದ ಯಾವ ರಾಜ್ಯಕ್ಕೆ ಸೇರಿದವರು ಎಂಬ ಬಗ್ಗೆ ತಿಳಿದು ಬಂದಿಲ್ಲ. ಆದರೆ ನಾಲ್ವರೂ ಕೂಡ ಕಳೆದ ಒಂದು ವರ್ಷದಿಂದ ಇಲ್ಲಿನ ವಿಶ್ವ ವಿದ್ಯಾಲಯವೊಂದರಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. 
 
ಮೂಲಗಳ ಪ್ರಕಾರ, ಇವರನ್ನು ನಿನ್ನೆ ಸಂಜೆ ಅಪಹರಿಸಲಾಗಿದ್ದು, ಐಎಸ್ಐಎಸ್ ಉಗ್ರರೇ ಅಪಹರಿಸಿದ್ದಾರೆ ಎಂಬುದು ಖಚಿತವಾಗಿದೆ ಎಂದು ಲಿಬಿಯಾದ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. 
 
ಇನ್ನು ವಿದೇಶಾಂಗ ಇಲಾಖೆಯ ಮೂಲಗಳ ಪ್ರಕಾರ, ಉಗ್ರರು ಕೇವಲ ಅಪಹರಿಸಿದ್ದಾರೆಯೇ ಹೊರತು ಯಾವುದೇ ಬೇಡಿಕೆಗಳನ್ನಿಟ್ಟಿಲ್ಲ ಎನ್ನಲಾಗಿದ್ದು, ಅಪಹರಣಕ್ಕೊಳಗಾಗಿರುವ ಎಲ್ಲರನ್ನೂ ಬಿಡಿಸಲು ಇಲಾಖೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ಹಿಂದೆ 39 ಮಂದಿ ಭಾರತೀಯ ಪ್ರಜೆಗಳನ್ನು ಐಎಸ್ಐಎಸ್ ಉಗ್ರರು ಅಪಹರಿಸಿ ಒತ್ತೆ ಇಟ್ಟುಕೊಂಡಿದ್ದರು. ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ