ಉಪಚುನಾವಣೆ ಟಿಕೆಟ್ ನನಗೆ ಬೇಕಾಗಿಲ್ಲ ಎಂದ ಜಗ್ಗೇಶ್

ಬುಧವಾರ, 25 ಸೆಪ್ಟಂಬರ್ 2019 (08:51 IST)
ಬೆಂಗಳೂರು: ಈ ಬಾರಿ ಉಪಚುನಾವಣೆಯಲ್ಲಿ ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಮತ್ತೆ ನಟ ಜಗ್ಗೇಶ್ ಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಕೆಲವು ಕಾರ್ಯಕರ್ತರು ಒತ್ತಾಯಿಸಿದ ಸುದ್ದಿ ಬೆನ್ನಲ್ಲೇ ಇದೀಗ ಜಗ್ಗೇಶ್ ನನಗೆ ಟಿಕೆಟ್ ಸಿಕ್ಕಿಯೇ ತೀರಬೇಕೆಂದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.


ಜಗ್ಗೇಶ್ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡವಿದ್ದರೂ ಪಕ್ಷ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆ ಇಲ್ಲ. ಹೀಗಾಗಿ ಜಗ್ಗೇಶ್ ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು, ನನಗೆ ಟಿಕೆಟ್ ಬೇಕಾಗಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

‘ಕನ್ನಡಿಗರ ಚಪ್ಪಾಳೆ ಮುಂದೆ ಎಲ್ಲವೂ ನಗಣ್ಯ. ಪಕ್ಷದ ಶಿಸ್ತಿನ ಸಿಪಾಯಿ ನಾನು. ನಾನು ಒಂದು ಪ್ರಾರ್ಥನೆ ಮಂಡಿಸಿದರೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಎಲ್ಲಾ ಮಂತ್ರಿಗಳು ನನ್ನ, ಶಾಸಕರು ಮರು ಚಿಂತಿಸದೆ ನನ್ನ ಬೇಡಿಕೆ ಈಡೇರಿಸಲು ಸಿದ್ಧವಿರುವಾಗ ನನಗೇಕೆ ಅಧಿಕಾರದ ಚಿಂತೆ?’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಈ ಮೂಲಕ ತಾನು ಟಿಕೆಟ್ ಗಾಗಿ ಬಂಡಾಯವೇಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ