ನಾನು ಅನುಭವಿಸಿದ ನೋವಿನ ಮುಂದೆ ಕರೋನಾ ಏನೂ ಇಲ್ಲ ಬಿಡಿ: ಜಗ್ಗೇಶ್
ಸೋಮವಾರ, 28 ಡಿಸೆಂಬರ್ 2020 (10:24 IST)
ಬೆಂಗಳೂರು: ನಾನು ನನ್ನ ಆರಂಭದ ದಿನಗಳಲ್ಲಿ ಅನುಭವಿಸಿದ ನೋವಿನ ಮುಂದೆ ಇಂದು ಕರೋನಾದಿಂದ ಅನುಭವಿಸುತ್ತಿರುವ ಸಂಕಷ್ಟ ಏನೂ ಇಲ್ಲ ಬಿಡಿ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
1980 ರಿಂದ 88 ರವರೆಗೆ ನಾನು ಜೀವನದಲ್ಲಿ ಅನುಭವಿಸಿದ ನೋವಿನ ಮುಂದೆ ಈ ಕೊರೋನಾ ತೃಣ. ಸಂಕಷ್ಟ ಬಂದದ್ದೆಲ್ಲಾ ಬಂದರೂ ಬುಲ್ಡೋಜರ್ ರೀತಿ ಅಗೆದು ಬಗೆದು ಪಕ್ಕಕ್ಕೆ ತಳ್ಳಿ ದಾರಿ ಮಾಡಿ ಮುಂದೆ ಹೋಗುತ್ತಿರಬೇಕು. 2020 ರ ಕೊರೋನಾ ಲೆಕ್ಕಿಸದೇ ಆಶಾಭಾವದಿಂದ 2021 ನ್ನು ಬರಮಾಡಿಕೊಳ್ಳುವ. ರಾತ್ರಿ ಆದ ಮೇಲೆ ಬೆಳಗು, ಲೈಫ್ ಈಸ್ ಬ್ಯೂಟಿಫುಲ್ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.