ಇವರೆಲ್ಲಾ ಕೊರೋನಾ ಕ್ಯಾರಿಯರ್ಸ್: ಜಗ್ಗೇಶ್ ಆಕ್ರೋಶ
‘ಇಂಥಾ ಗುಣದವರೆ ಕೊರೋನಾ ಕ್ಯಾರಿಯರ್ಸ್. ಕೊರೋನಾ ಬಂದಿದ್ದು ತಿಳಿದಿದ್ದರು ಮಾಸ್ಕ್ ಹಾಕದೇ ನನ್ನ ಸ್ನೇಹಿತನ ಮನೆಗೆ ಕಾಗೆಗಳಂತೆ ಹೊಕ್ಕು ಕೊರೋನಾ ಪ್ರೆಸೆಂಟೇಷನ್ ಕೊಟ್ಟು ಅವರ ತಂದೆ-ತಾಯಿ, 20 ವರ್ಷದ ತಮ್ಮನನ್ನು ಬಲಿಪಡೆದರು. ನನ್ನ ಹುಡುಗ ಸಾವು ಬದುಕಿನ ನಡುವೆ ನರಳಾಡುತ್ತಾ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾನೆ. ಯಾರೇ ಇರಲಿ, ಅಂತರ, ಮಾಸ್ಕ್ ಬಳಸಿ, ಪ್ಲೀಸ್’ ಎಂದು ಜಗ್ಗೇಶ್ ಮನವಿ ಮಾಡಿದ್ದಾರೆ.