ಮಾರ್ಚ್ 13 ಕ್ಕೆ ಜೇಮ್ಸ್ ಪ್ರಿರಿಲೀಸ್ ಈವೆಂಟ್: ಅತಿಥಿಗಳು ಯಾರೆಲ್ಲಾ?

ಶನಿವಾರ, 12 ಮಾರ್ಚ್ 2022 (10:15 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಪ್ರಿ ರಿಲೀಸ್ ಈವೆಂಟ್ ಇದೇ ಭಾನುವಾರ ಅಂದರೆ ಮಾರ್ಚ್ 13 ರಂದು ನಡೆಯಲಿದೆ.

ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಜೇಮ್ಸ್ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದ್ದು, ಶಿವರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಶ್ರೀಮುರಳಿ ಸೇರಿದಂತೆ ಕಲಾವಿದರ ದಂಡೇ ನೆರೆಯಲಿದೆ.

ಜೊತೆಗೆ ಅಭಿಮಾನಿಗಳಿಗೂ ಪಾಸ್ ಇಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳೂ ನೆರೆಯುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ