ಕಿರಣ್ ರಾಜ್ ‘ಜೀವ್ನಾನೇ ನಾಟ್ಕ ಸಾಮಿ’ ಟ್ರೈಲರ್ ರಿಲೀಸ್

ಶುಕ್ರವಾರ, 30 ಜುಲೈ 2021 (10:48 IST)
ಬೆಂಗಳೂರು: ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಜೀವ್ನಾನೇ ನಾಟ್ಕ ಸಾಮಿ’ ಸಿನಿಮಾದ ಟ್ರೈಲರ್ ಇಂದು ರಿಲೀಸ್ ಆಗಲಿದೆ.


ಸಿನಿಮಾ ಬಿಡುಗಡೆಗೆ ಮುನ್ನವೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆಗಸ್ಟ್ 19 ಕ್ಕೆ ಸಿನಿಮಾ ಥಿಯೇಟರ್ ಗೆ ಬರುತ್ತಿದೆ. ಲಾಕ್ ಡೌನ್ ಬಳಿಕ ಥಿಯೇಟರ್ ಗೆ ಬರುತ್ತಿರುವ ಹೊಸಬರ ಈ ಸಿನಿಮಾ ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಥ್ರಿಲ್ಲಿಂಗ್ ದೃಶ್ಯಗಳ ಮೂಲಕ ಪ್ರೇಕ್ಷಕರಿಗೆ ರಸದೌತಣ ಕೊಡಲಿದೆ ಎಂಬ ಭರವಸೆಯಿದೆ. ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಹಿನ್ನಲೆ ಸಂಗೀತವೂ ಗಮನಸೆಳೆಯುವಂತಿದೆ.

ಲಲಿತಾ ರಾಜಶೇಖರ ಶಿರಹಟ್ಟಿ ನಿರ್ಮಾಣ ಮಾಡಿರುವ ಸಿನಿಮಾವನ್ನು ರಾಜು ಭಂಡಾರಿ ರಾಜಾವರ್ತ ನಿರ್ದೇಶಿಸಿದ್ದಾರೆ. ಚಿತ್ರಕತೆ, ಸಂಭಾಷಣೆಯನ್ನೂ ರಾಜು ಭಂಡಾರಿ ಅವರೇ ಬರೆದಿದ್ದಾರೆ. ಕಿರಣ್ ರಾಜ್ ಜೊತೆಗೆ ಸರಿಗಮಪ ಶೋ ಖ್ಯಾತಿಯ ಶ್ರೀಹರ್ಷ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಜೊತೆಗೆ ಪವಿತ್ರಾ ಕೋಟ್ಯಾನ್, ಅನಿಕ ರಮ್ಯ ಮುಂತಾದವರ ತಾರಾಗಣ ಚಿತ್ರಕ್ಕಿದೆ.

ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, ಲಿಂಕ್ ಇಲ್ಲಿದೆ ನೋಡಿ:


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ