ಅನಂತ್- ರಾಧಿಕಾ ಮದುವೆ ವೆಚ್ಚ ಭರಿಸಲು ಜಿಯೋ ಗ್ರಾಹಕರಿಗೆ ಶಾಕ್, ಕಾಲೆಳೆದ ನೆಟ್ಟಿಗರು

Sampriya

ಶುಕ್ರವಾರ, 28 ಜೂನ್ 2024 (15:05 IST)
Photo Courtesy X
ಬೆಂಗಳೂರು:  ದೇಶದಲ್ಲಿ ಹೆಚ್ಚು ಜನರು ಬಳಸುತ್ತಿರುವ ರಿಲಯನ್ಸ್ ಜಿಯೋ ತನ್ನ ಎಲ್ಲ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

ಇನ್ನೂ ಹೊಸ ಪ್ಲ್ಯಾನ್‌ಗಳು ಜುಲೈ 3ರಿಂದ ಜಾರಿಯಾಗಲಿದೆ ಎಂದು ಕಂಪೆನಿ ಘೋಷಣೆ ಮಾಡಿದೆ.   ಜಾರಿಯಾಗಿರುವ ಹೊಸ ಪ್ಲ್ಯಾನ್ ಪ್ರಕಾರ ಈ ಹಿಂದೆ 155 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಜುಲೈ  3ರಿಂದ 189ರೂಪಾಯಿಗೆ ಏರಿಕೆಯಾಗಲಿದೆ. ಈ ಮೂಲಕ ಹೊಸ ಪ್ಲ್ಯಾನ್‌ನಲ್ಲಿ ಶೇ 22ರಷ್ಟು ದರವನ್ನು ಏರಿಕೆ ಮಾಡಿದೆ.

ಇನ್ನೂ ನೆಟಿಜನ್‌ಗಳು "ಕೈಗೆಟುಕಲಾಗದ" ಹೊಸ ಸುಂಕದ ಯೋಜನೆಯ ಬಗ್ಗೆ "ನಿರಾಶೆ ವ್ಯಕ್ತಪಡಿಸಿದ್ದಾರೆ.  ಇನ್ನೂ ಕೆಲವರು ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಸಮಾರಂಭದ ವೆಚ್ಚವನ್ನು ಭರಿಸುವ ಸಲುವಾಗಿ ಜಿಯೋ ಪ್ಲ್ಯಾನ್‌ಗಳಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಲೇವಾಡಿ ಮಾಡಿದ್ದಾರೆ.

"ರಿಲಯನ್ಸ್ ಜಿಯೋ ತನ್ನ ಟ್ಯಾರಿಫ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ.  ಮದುವೆಯ ಪೂರ್ವದ ವೆಚ್ಚವನ್ನು ಭರಿಸಬೇಕಾಗುತ್ತದೆ" ಎಂದು ಎಕ್ಸ್ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ