ಜ್ಯೂ.ಎನ್ ಟಿಆರ್ ದೇವರ ಸಿನಿಮಾದ ಲುಕ್ ಸೇಮ್ ಟು ಸೇಮ್ ರಿಷಬ್ ಶೆಟ್ಟಿಯಂತಿದೆ!
ಈಗ ಇದು ಮತ್ತೊಮ್ಮೆ ಸಾಬೀತಾಗಿದೆ. ಜ್ಯೂ.ಎನ್ ಟಿಆರ್ ನಾಯಕರಾಗಿರುವ ದೇವರ ಸಿನಿಮಾದ ಫೋಟೋವೊಂದು ಆನ್ ಲೈನ್ ನಲ್ಲಿ ಪ್ರಕಟವಾಗಿದೆ. ಈ ಫೋಟೋದಲ್ಲಿ ಜ್ಯೂ.ಎನ್ ಟಿಆರ್ ಸೇಮ್ ಟು ಸೇಮ್ ಕಾಂತಾರದಲ್ಲಿ ರಿಷಬ್ ಶೆಟ್ಟಿ ಕಾಣಿಸಿದಂತೇ ಕಾಣುತ್ತಿದ್ದಾರೆ.
ಕುರುಚಲು ಗಡ್ಡ, ಗುಂಗುರು ಕೂದಲು, ಹೆಗಲ ಮೇಲೊಂದು ಶಾಲು ಹಾಕಿಕೊಂಡು ರಿಷಬ್ ಕಾಂತಾರದಲ್ಲಿ ಹೇಗೆ ಕಾಣಿಸ್ತಿದ್ದಾರೋ ಅದೇ ರೀತಿ ಜ್ಯೂ.ಎನ್ ಟಿಆರ್ ದೇವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿ ನೆಟ್ಟಿಗರು ಇದು ರಿಷಬ್ ಶೆಟ್ಟಿನಾ ಅಂತ ಕನ್ ಫ್ಯೂಸ್ ಮಾಡಿಕೊಂಡಿದ್ದಾರೆ.
ಗೋವಾದಲ್ಲಿ ದೇವರ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ಜ್ಯೂ.ಎನ್ ಟಿಆರ್ ಇರುವ ಫೋಟೋ ಇದಾಗಿದೆ. ಇದನ್ನು ನೋಡಿ ಜ್ಯೂ.ಎನ್ ಟಿಆರ್ ಕಾಂತಾರ 2 ಸೆಟ್ ಗೆ ಬಂದಿದ್ದಾರೆ ಎಂದು ಹಲವರು ತಮಾಷೆ ಮಾಡಿದ್ದಾರೆ.