ರಜನಿ ಜತೆ ಕೈ ಜೋಡಿಸುವುದಕ್ಕೆ ನಾನು ರೆಡಿ ಎಂದ ಕಮಲ್ ಹಾಸನ್
ರಜನೀಕಾಂತ್ ಕೂಡಾ ಈ ಮೊದಲು ರಾಜಕೀಯಕ್ಕೆ ಬರುವುದಾಗಿ ಸುಳಿವು ನೀಡಿದ್ದರು. ಸೆಪ್ಟೆಂಬರ್ ನಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಇತ್ತ ಕಮಲ್ ಕೂಡಾ ತಮ್ಮದೇ ಪಕ್ಷ ಸ್ಥಾಪಿಸುವ ಮಾತನಾಡುತ್ತಿದ್ದಾರೆ. ಹೀಗಾಗಿ ಈ ಇಬ್ಬರೂ ಸೂಪರ್ ಸ್ಟಾರ್ ಗಳು ಒಂದಾದರೆ ತಮಿಳುನಾಡು ರಾಜಕೀಯದಲ್ಲಿ ತಲ್ಲಣವಾಗುವುದಂತೂ ಖಚಿತ.