ರಿಯಾಲಿಟಿ ಶೋನಲ್ಲಿ ಮಿಂಚಬೇಕಿದ್ದವ ಮಸಣ ಸೇರಿದ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲೆಂದೇ ಅವರು ತಯಾರಿ ನಡೆಸಿಕೊಂಡಿದ್ದರು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ಕಲರ್ಸ್ ಸೂಪರ್ ವಾಹಿನಿಯ ಮಜಾಭಾರತ ಕಾಮಿಡಿ ಶೋನಲ್ಲಿ ಮಿಂಚಿದ್ದ ಜೀವನ್ ಗೆ ಉತ್ತಮ ಕಾಮಿಡಿಯನ್ ಆಗಬೇಕೆಂಬ ಕನಸಿತ್ತು. ಆದರೆ ಅದೆಲ್ಲವೂ ಈಗ ಕನಸಾಗಿಯೇ ಉಳಿದಿದೆ. ಅವರ ನೆನಪಿನಲ್ಲಿ ಮಜಾಭಾರತ ನಿರೂಪಕಿ ಶೀತಲ್ ಶೆಟ್ಟಿ ಕಂಬನಿ ಮಿಡಿದಿದ್ದಾರೆ.