ಕೆಂಗೇರಿಯಲ್ಲಿ ನಟಿ ರಚನಾ ಅಂತ್ಯಸಂಸ್ಕಾರ

ಗುರುವಾರ, 24 ಆಗಸ್ಟ್ 2017 (13:06 IST)
ಬೆಂಗಳೂರು: ನಿನ್ನೆ ತಡರಾತ್ರಿ ನೆಲಮಂಗಲ ಬಳಿ ನಡೆದ ಅಪಘಾತದಲ್ಲಿ ದುರ್ಮರಣಕ್ಕೀಡಾದ ನಟಿ ರಚನಾ ಅಂತ್ಯ ಸಂಸ್ಕಾರ ಕೆಂಗೇರಿಯಲ್ಲಿ ನಡೆಯಲಿದೆ.

 
ಈಗಾಗಲೇ ಮೃತದೇಹ ರಚನಾ ಅವರ ಆರ್ ಆರ್ ನಗರ ನಿವಾಸ ತಲುಪಿದೆ. ಮೃತದೇಹ ನೋಡುತ್ತಿದ್ದಂತೆ ತಾಯಿ ಜಾನಕಿ ಸೇರಿದಂತೆ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.

ಒಂದು ಗಂಟೆಗಳ ಕಾಲದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ ನಂತರ ರಚನಾ ಮೃತದೇಹವನ್ನು ಕೆಂಗೇರಿಯ ಚಿತಾಗಾರದಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಓದಿ.. ‘ಗಣಪತಿ ಪ್ರಕರಣ ಮುಚ್ಚಿಹಾಕಲು ರಾಜ್ಯ ಸರ್ಕಾರದ ಬಳಿ ಪರಿಣಿತರಿದ್ದಾರೆ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ