ತಿರುಪತಿ ಲಡ್ಡಿನ ಕುಹುಕ ಮಾಡಿದ್ದ ನಟ ಕಾರ್ತಿ: ಪವನ್ ಕಲ್ಯಾಣ್ ಆಕ್ರೋಶಕ್ಕೆ ಕಂಗಾಲು

Sampriya

ಮಂಗಳವಾರ, 24 ಸೆಪ್ಟಂಬರ್ 2024 (16:13 IST)
Photo Courtesy X
ಆಂಧ್ರಪ್ರದೇಶ: ತಿರುಪತಿ ಲಡ್ಡು ವಿಚಾರವಾಗಿ ಡಿಸಿಎಂ ಪವನ್ ಕಲ್ಯಾಣ್ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಖ್ಯಾತ ನಟ ಕಾರ್ತಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.

ನಿನ್ನೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಕಾರ್ತಿ ಅವರಿಗೆ ನಿರೂಪಕರೊಬ್ಬರು ಲಡ್ಡು ಬಗ್ಗೆ ಕೇಳಿದಾಗ, ನಾವು ಈ ಲಡ್ಡು ಬಗ್ಗೆ ಮಾತನಾಡಬಾರದು, ಇದು ಸೂಕ್ಷ್ಮ ವಿಷಯ, ನಮಗೆ ಬೇಡ ಎಂದು ಹೇಳಿಕೆ ನೀಡಿದ್ದರು.

ಕಾರ್ತಿ ಹೇಳಿಕೆ  ವಿಚಾರವಾಗಿ ಡಿಸಿಎಂ ಪವನ್ ಕಲ್ಯಾಣ್ ಅವರು ಅಸಮಾಧಾನ ಹೊರಪಡಿಸಿದರು. ಚಿತ್ರರಂಗದ ವ್ಯಕ್ತಿಗಳು ಈ ವಿಷಯವನ್ನು ಚರ್ಚಿಸಲು ಬಯಸಿದರೆ, ಬೆಂಬಲಿಸಬೇಕು, ಇಲ್ಲದಿದ್ದರೆ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಹೇಳಿದರು.

ಸಾರ್ವಜನಿಕ ವೇದಿಕೆಗಳಲ್ಲಿ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವುದನ್ನು ತಡೆಯಲು ಜನರನ್ನು ಒತ್ತಾಯಿಸಿದ ಪವನ್ ಅವರು, ಇದು ಗಮನಾರ್ಹ ಕಾಳಜಿಯ ವಿಷಯ ಎಂದು ಒತ್ತಿ ಹೇಳಿದರು.

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ವಾಗ್ದಾಳಿ ನಡೆಸಿದ ನಂತರ ತಮಿಳು ನಟ ಕಾರ್ತಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದಾರೆ.

ಪವನ್ ಕಲ್ಯಾಣ್ ಅವರ ಪ್ರತಿಕ್ರಿಯೆ ವೈರಲ್ ಆದ ಕೂಡಲೇ ಕಾರ್ತಿ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ಅವರು ಬರೆದಿದ್ದಾರೆ, "ಪ್ರಿಯ ಪವನ್ ಕಲ್ಯಾಣ್ ಸರ್, ನಿಮಗೆ ಆಳವಾದ ಗೌರವಗಳೊಂದಿಗೆ, ಯಾವುದೇ ಉದ್ದೇಶಪೂರ್ವಕವಲ್ಲದ ತಪ್ಪುಗ್ರಹಿಕೆಗೆ ನಾನು ಕ್ಷಮೆಯಾಚಿಸುತ್ತೇನೆ. ಭಗವಾನ್ ವೆಂಕಟೇಶ್ವರನ ವಿನಮ್ರ ಭಕ್ತನಾಗಿ, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಪ್ರೀತಿಸುತ್ತೇನೆ. ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ