ಇಂದಿನಿಂದ ಕೆಸಿಸಿ ಕ್ರಿಕೆಟ್ ಕದನ: ಕಿಚ್ಚ, ಶಿವಣ್ಣನ ಕ್ರಿಕೆಟ್ ಖದರ್
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ 6 ತಂಡಗಳನ್ನೊಳಗೊಂಡ ಕೆಸಿಸಿ ಕಪ್ ನಡೆಯಲಿದೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಗಣೇಶ್, ಧ್ರುವ ಸರ್ಜಾ, ಡಾಲಿ ಧನಂಜಯ್, ಉಪೇಂದ್ರ ಅವರ ನಾಯಕತ್ವದ ತಂಡಗಳು ಕಣಕ್ಕಿಳಿಯಲಿವೆ.
ಮೊನ್ನೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಮಾರಾಟ ಶುರುವಾಗಿದೆ. ಇಂದು ಮತ್ತು ನಾಳೆ ಟೂರ್ನಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ನಡೆಯಲಿದೆ. 3 ಗಂಟೆಗೆ ಮೊದಲ ಪಂದ್ಯ ಆರಂಭವಾಗಲಿದೆ. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆಯಿದೆ.