ತಾಂತ್ರಿಕವಾಗಿ ಶ್ರೀಮಂತ ಕೆಜಿಎಫ್ 2: ನೆಟ್ಟಿಗರ ರಿವ್ಯೂ

ಗುರುವಾರ, 14 ಏಪ್ರಿಲ್ 2022 (08:35 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆಯಾಗಿದ್ದು, ತಾಂತ್ರಿಕವಾಗಿ ಕೆಜಿಎಫ್ 2 ಶ್ರೀಮಂತವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ. ಸಿನಿಮಾ ನೋಡುತ್ತಿದ್ದರೆ ರೋಮಾಂಚನವಾಗುತ್ತದೆ ಎನ್ನುತ್ತಿದ್ದಾರೆ.

ರಾಕಿಂಗ್ ‍ಸ್ಟಾರ್ ಯಶ್, ಸಂಜಯ್ ದತ್ ಮತ್ತು ರವಿ ಬಸ್ರೂರು ಹಿನ್ನಲೆ ಸಂಗೀತ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಸಿನಿಮಾ ನೋಡುತ್ತಿದ್ದರೆ ಇದುವರೆಗಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡುವುದರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ