ಕೆಜಿಎಫ್ 2 ಗೆ ಅದ್ಭುತ ಹಾಡು ಮಾಡಲು ಜೊತೆ ಸೇರಿದ ಪ್ರಶಾಂತ್ ನೀಲ್-ರವಿ ಬಸ್ರೂರು

ಮಂಗಳವಾರ, 19 ಮೇ 2020 (09:19 IST)
ಬೆಂಗಳೂರು: ಲಾಕ್ ಡೌನ್ ನಡುವೆಯೂ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅನುಮತಿ ಸಿಕ್ಕಿರುವುದರಿಂದ ಕೆಜಿಎಫ್ 2 ಸಿನಿಮಾ ತಂಡ ಸಂಗೀತ ಸಂಯೋಜನೆ ಕೆಲಸವನ್ನು ಶುರು ಮಾಡಿಕೊಂಡಿದೆ.


ಕೆಜಿಎಫ್ 1 ಸಿನಿಮಾದಲ್ಲಿ ಹಾಡುಗಳೂ ಭರ್ಜರಿ ಹಿಟ್ ಆಗಿದ್ದವು. ರವಿ ಬಸ್ರೂರು ಸಂಗೀತ ನಿರ್ದೇಶಕರಾಗಿ ಒಳ್ಳೆಯ ಹೆಸರು ಮಾಡಿದ್ದರು. ಇದೀಗ ಕೆಜಿಎಫ್ 2 ನಲ್ಲೂ ರವಿ ಅಂತಹದ್ದೇ ಮ್ಯಾಜಿಕ್ ಮಾಡಲಿದ್ದಾರಂತೆ.

ಮೂಲಗಳ ಪ್ರಕಾರ ಕೆಜಿಎಫ್ 1 ನಲ್ಲಿ ತಾಯಿ ಕುರಿತಾಗಿ ಇದ್ದಿದ್ದ ಪವರ್ ಫುಲ್ ಹಾಡಿನಂತದ್ದೇ ಹಾಡನ್ನು ಕೆಜಿಎಫ್ 2 ನಲ್ಲೂ ಸಂಯೋಜನೆ ಮಾಡಲಾಗುತ್ತಿದೆಯಂತೆ. ಇದಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್, ರವಿ ಬಸ್ರೂರು, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಕೆಜಿಎಫ್ 2 ಜತೆ ಸೇರಿ ಸ್ಟುಡಿಯೋದಲ್ಲಿ ಕುಳಿತು ಸೀರಿಯಸ್ ಆಗಿ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಅಂದ ಹಾಗೆ ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಉಳಿಸಿಕೊಂಡಿದ್ದು, ಲಾಕ್ ಡೌನ್ ನಿರ್ಬಂಧ ತೆರವಾದ ಬಳಿಕ ಈ ಚಿತ್ರೀಕರಣ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ