ಇಂದು ಚೆನ್ನೈನಲ್ಲಿ ರಾಕಿ ಭಾಯಿ ಯಶ್ ಹವಾ

ಗುರುವಾರ, 7 ಏಪ್ರಿಲ್ 2022 (09:20 IST)
ಚೆನ್ನೈ: ಕೆಜಿಎಫ್ 2 ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇಂದು ತಮಿಳುನಾಡಿಗೆ ಬಂದಿಳಿಯಲಿದೆ.

ಇಂದು ಸಂಜೆ 5.30 ಕ್ಕೆ ಚೆನ್ನೈನ ದಿ ಲೀಲಾ ಪ್ಯಾಲೇಸ್ ಪಂಚತಾರಾ ಹೋಟೆಲ್ ನಲ್ಲಿ ಕೆಜಿಎಫ್ 2 ಚಿತ್ರತಂಡ ಪ್ರಚಾರ ಕಾರ್ಯ ಮಾಡಲಿದೆ.

ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಇಡೀ ಚಿತ್ರತಂಡ ಆಗಮಿಸಲಿದೆ. ಇದಕ್ಕಾಗಿ ಈಗಾಗಲೇ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಅದ್ಧೂರಿ ವೇದಿಕೆ ಸಜ್ಜು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ