ಬಿಡುಗಡೆಯಾದ ಅರ್ಧವೇ ಗಂಟೆಯಲ್ಲಿ 2 ಮಿಲಿಯನ್ ವೀಕ್ಷಣೆ: ಕೆಜಿಎಫ್ 2 ದಾಖಲೆ

ಶುಕ್ರವಾರ, 8 ಜನವರಿ 2021 (09:47 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದ ಟೀಸರ್ ನಿನ್ನೆ ರಾತ್ರಿ 9.29 ಕ್ಕೆ ಬಿಡುಗಡೆಯಾಗಿದೆ. ಬಿಡುಗಡೆಯಾದ ಅರ್ಧವೇ ಗಂಟೆಯಲ್ಲಿ 2 ಮಿಲಿಯನ್ ವ್ಯೂ ಗಳಿಸಿ ರಾಕಿ ಭಾಯ್ ದಾಖಲೆ ಮಾಡಿದ್ದಾನೆ.


ಇಂಗ್ಲಿಷ್ ಭಾಷೆಯ ಹಿನ್ನಲೆಯ ಧ‍್ವನಿಯಲ್ಲಿ ಟೀಸರ್ ಲಾಂಚ್ ಮಾಡಲಾಗಿದೆ. ಹೀಗಾಗಿ ಎಲ್ಲಾ ಭಾಷೆಯಲ್ಲೂ ಒಂದೇ ಟೀಸರ್ ಬಿಡುಗಡೆಯಾಗಿದೆ. ಕೇವಲ ಭಾರತ ಮಾತ್ರವಲ್ಲ, ವಿದೇಶದಲ್ಲೂ ಕೆಜಿಎಫ್ 2 ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಅಗ್ರ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದೆ. ಅಷ್ಟೇ ಅಲ್ಲದೆ, ಕನ್ನಡ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಸ್ಟಾರ್ ನಟ-ನಟಿಯರೂ ಟೀಸರ್ ನೋಡಿ ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ