ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾ ಹೆಸರೇ ಬದಲು! ಕಾರಣ ತಿಳಿಸಿದ ನಿರ್ದೇಶಕ

ಸೋಮವಾರ, 25 ಜನವರಿ 2021 (07:49 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಫ್ಯಾಂಟಮ್ ಸಿನಿಮಾದ ಟೈಟಲ್ ಬದಲಾಗಿದೆ. ಟೀಸರ್ ರಿಲೀಸ್ ಗೆ ನಾಲ್ಕು ದಿನ ಬಾಕಿ ಇರುವಾಗಲೇ ಚಿತ್ರತಂಡ ಈ ಬದಲಾವಣೆ ಪ್ರಕಟಿಸಿದೆ.


ಫ್ಯಾಂಟಮ್ ಸಿನಿಮಾ ಹೆಸರು ‘ವಿಕ್ರಾಂತ್ ರೋಣ’ ಎಂದು ಬದಲಾಗಿದೆ. ಇದು ಈ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು. ಟ್ವಿಟರ್ ಪೇಜ್ ಮೂಲಕ ಬದಲಾವಣೆಗೆ ಕಾರಣ ತಿಳಿಸಿದ ನಿರ್ದೇಶಕ ಅನೂಪ್ ಭಂಡಾರಿ, ‘ಫ್ಯಾಂಟಮ್ ಹೆಸರಿನಷ್ಟೇ ವಿಕ್ರಾಂತ್ ರೋಣ ಎನ್ನುವ ಹೆಸರೂ ಮೊದಲ ದಿನದಿಂದಲೇ ಸುದ್ದಿ ಮಾಡಿತ್ತು. ಈ ಹೆಸರು ನಾವು ಎಲ್ಲಿಂದಲೋ ಪಡೆದಿದ್ದಲ್ಲ. ನಾವೇ ಹುಟ್ಟುಹಾಕಿದ್ದು. ಹೀಗಾಗಿ ನೀವೆಲ್ಲಾ ಇಷ್ಟಪಟ್ಟ ಹೆಸರನ್ನು ಅದೇ ಹೆಸರಲ್ಲೇ ಪ್ರಪಂಚಕ್ಕೆ ಪರಿಚಯ ಮಾಡೋಣಾಂತ ಟೈಟಲ್ ಬದಲು ಮಾಡಲಾಗಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ