ಕಿಚ್ಚ ಸುದೀಪ್ ಗೆ ಇಂದು ಜನ್ಮದಿನದ ಸಂಭ್ರಮ

ಶುಕ್ರವಾರ, 2 ಸೆಪ್ಟಂಬರ್ 2022 (08:10 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಜನ್ಮದಿನದ ಸಂಭ್ರಮ. ಸಹಜವಾಗಿಯೇ ಈ ಬಾರಿ ಕೊರೋನಾ ಭೀತಿಯೂ ಇಲ್ಲದೇ ಇರುವುದರಿಂದ ಫ್ಯಾನ್ಸ್ ಅದ್ಧೂರಿಯಾಗಿಯೇ ಕಿಚ್ಚನ ಹುಟ್ಟುಹಬ್ಬ ಆಚರಿಸಲು ತಯಾರಿ ನಡೆಸಿದ್ದಾರೆ.

ಸುದೀಪ್ ಹುಟ್ಟುಹಬ್ಬದ ದಿನವಾದ ಇಂದು ವಿಕ್ರಾಂತ್ ರೋಣ ಒಟಿಟಿಯಲ್ಲಿ ಪ್ರಸಾರ ಆರಂಭಿಸುತ್ತಿದೆ. ಇದರ ಹೊರತಾಗಿ ಹೊಸ ಸಿನಿಮಾಗಳು ಘೋಷಣೆಯಾಗುವ ಸೂಚನೆ ಇಲ್ಲ.

ಆದರೆ ಕಿಚ್ಚ ಸುದೀಪ್ ಈಗಾಗಲೇ ಕೆಲವೊಂದು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದು, ಈ ವರ್ಷ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮತ್ತಷ್ಟು ಸಿನಿಮಾ ಸಿಗುವುದಂತೂ ಗ್ಯಾರಂಟಿ. ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಕಬ್ಜ ಸಿನಿಮಾ ಜೊತೆಗೆ, ಅನೂಪ್ ಭಂಡಾರಿ ಜೊತೆ ಸುದೀಪ್ ಮತ್ತೊಂದು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರುವ ಸಾಧ‍್ಯತೆಯಿದೆ.

ಇನ್ನು,  ಈ ಬಾರಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಪುರಿಯ ಓಂ ಬೀಚ್ ನಲ್ಲಿ ಮರಳಿನಲ್ಲಿ ಸುದೀಪ್ ಕಲಾಕೃತಿ ನಿರ್ಮಿಸಿ ಶುಭ ಕೋರಲಾಗಿದೆ. ಇದಲ್ಲದೆ, ವಿಶೇಷ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ