ಚುನಾವಣಾ ಪ್ರಚಾರ ಮುಗಿಸಿದ ಕಿಚ್ಚ ಸುದೀಪ್
ಇಂದು ಮೈಸೂರಿನಲ್ಲಿ ಸುದೀಪ್ ಪ್ರಚಾರ ಕೆಲಸ ಮಾಡಿದ್ದಾರೆ. ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ ಮುಂತಾದ ಕಡೆ ಪ್ರಚಾರ ಕೆಲಸ ಮಾಡಿದ ಸುದೀಪ್ ಪ್ರಚಾರ ಕಾರ್ಯಕ್ಕೆ ತೆರೆ ಎಳೆದಿದ್ದಾರೆ.
ಬಳಿಕ ಟ್ವೀಟ್ ಮಾಡಿರುವ ಅವರು ಅಭ್ಯರ್ಥಿಗಳಿಗೆ ಶುಭ ಹಾರೈಸಿದ್ದಲ್ಲದೆ, ತಾವು ಹೋದಲೆಲ್ಲಾ ಪ್ರೀತಿ ತೋರಿದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.