ಕಳೆದ ಹೋದ ಮಗುವಿನ ಹುಡುಕಲು ಸಹಾಯ ಮಾಡಿದ ಕಿಚ್ಚ ಸುದೀಪ್

ಗುರುವಾರ, 7 ನವೆಂಬರ್ 2019 (10:07 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳ ಕಷ್ಟಕ್ಕೆ ಸ್ಪಂದಿಸದೇ ಇರೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜತೆ ಸಕ್ರಿಯರಾಗಿರುವ ಸುದೀಪ್ ಕಳೆದು ಹೋದ ಬಾಲಕನೊಬ್ಬನ ಪತ್ತೆಗೆ ಸಹಕರಿಸಿದ್ದಾರೆ.


ಅಭಿಮಾನಿಯೊಬ್ಬರು ತಮ್ಮ ಸಂಬಂಧಿಕರ ಪುತ್ರ ಕಳೆದಹೋದ ಬಗ್ಗೆ ಫೋಟೋ ಸಮೇತ ಟ್ವೀಟ್ ಮಾಡಿದ್ದರು. ಇದನ್ನು ರಿಟ್ವೀಟ್ ಮಾಡಿದ್ದ ಕಿಚ್ಚ ಈ ಬಾಲಕನ ಪತ್ತೆಗೆ ಸಹಾಯ ಮಾಡುವಂತೆ ಅಭಿಮಾನಿ ಬಳಗಕ್ಕೆ ವಿನಂತಿಸಿದ್ದರು.

ಕೊನೆಗೂ ಈಗ ಬಾಲಕನ ಪತ್ತೆ ಮಾಡಲಾಗಿದ್ದು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದ್ದಾನೆ ಎಂದು ಟ್ವಿಟರ್ ಮೂಲಕ ಅಭಿಮಾನಿಗಳೇ ಮಾಹಿತಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದ್ದಿ ಕೇಳಿ ಖುಷಿಯಾಯಿತು. ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ