ಬೆದರಿಕೆ ಪತ್ರ ಬರೆದವರಿಗೆ ತಕ್ಕ ಉತ್ತರ ಕೊಡ್ತೀನಿ: ಕಿಚ್ಚ ಸುದೀಪ್
ಸುದೀಪ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಪತ್ರ ಬಂದಿತ್ತು. ಈ ಹಿನ್ನಲೆಯಲ್ಲಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, ಚಿತ್ರರಂಗದಲ್ಲೇ ನನ್ನನ್ನು ಕಂಡರಾಗದ ಕೆಲವರಿದ್ದಾರೆ. ಬೆದರಿಕೆ ಪತ್ರಗಳಿಗೆಲ್ಲಾ ಹೆದರುವುದಿಲ್ಲ. ಪತ್ರ ಬರೆದವರು ಯಾರು ಅಂತಾನೂ ನನಗೆ ಗೊತ್ತು. ಆದರೆ ಅವರ ಹೆಸರು ಇಲ್ಲಿ ಹೇಳಲ್ಲ. ಅವರಿಗೆ ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇನೆ ಎಂದಿದ್ದಾರೆ.