ಹೊಸ ವರ್ಷ ತಿರುಪತಿಗೆ ಭೇಟಿ ನೀಡಿದ ಸುದೀಪ್: ಕಿಚ್ಚನ ಕಡೆಯಿಂದ ಈ ತಿಂಗಳು ಇನ್ನೊಂದು ಸ್ಪೆಷಲ್ ಸುದ್ದಿ ಇದೆ!

ಮಂಗಳವಾರ, 1 ಜನವರಿ 2019 (10:30 IST)
ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ಮೊದಲು ಕಿಚ್ಚ ಸುದೀಪ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಆಶಿರ್ವಾದ ಪಡೆದುಕೊಂಡಿದ್ದಾರೆ. ಈ ತಿಂಗಳು ಕಿಚ್ಚನ ಕಡೆಯಿಂದ ಇನ್ನೊಂದು ಸುದ್ದಿ ಬರಲಿದೆ. ಅದೇನು ಗೊತ್ತಾ?


ಹೊಸ ವರ್ಷಕ್ಕೆ ಟ್ವಿಟರ್ ನಲ್ಲಿ ಶುಭ ಕೋರಿರುವ ಸುದೀಪ್ ಮತ್ತೊಂದು ವಿಶೇಷ ಹೊರಹಾಕಿದ್ದಾರೆ. ಇದೇ ತಿಂಗಳು 31 ಕ್ಕೆ ತಾವು ಚಿತ್ರರಂಗಕ್ಕೆ ಕಾಲಿಟ್ಟು 23 ವರ್ಷವಾಯಿತು ಎಂಬ ಸಂಗತಿಯನ್ನು ಕಿಚ್ಚ ಹೊರಹಾಕಿದ್ದಾರೆ.

ಆ ಮೂಲಕ ತಮಗೆ ಬೆಂಬಲ ನೀಡಿದ ಚಿತ್ರರಂಗ, ಅಭಿಮಾನಿಗಳು, ಮಾಧ್ಯಮ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನೀವು ನನಗೆ ಇಷ್ಟು ದಿನ ನೀಡಿದ ಬೆಂಬಲದಿಂದಲೇ ಈ ಯಶಸ್ಸಿನ ಹಾದಿ ಸಾಧ್ಯವಾಗಿದೆ ಎಂದು ಸುದೀಪ್ ಎಲ್ಲರನ್ನೂ ಸ್ಮರಿಸಿಕೊಂಡಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ಇದು ಹಬ್ಬದ ವಿಷಯವೇ ಸರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ