ಸುದೀಪ್ ಕೋಟಿಯಲ್ಲೊಬ್ಬನೇ! ಏಪ್ರಿಲ್ 2 ರವರೆಗೆ ಕಾಯಿರಿ!

ಸೋಮವಾರ, 29 ಮಾರ್ಚ್ 2021 (09:51 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಯ ದಿನಗಳು ಹತ್ತಿರ ಬರುತ್ತಿದ್ದಂತೇ ಚಿತ್ರತಂಡದಿಂದ ಒಂದೊಂದೇ ಅಪ್ ಡೇಟ್ ಬರುತ್ತಿದೆ.


ಮೊನ್ನೆಯಷ್ಟೇ ಸಿನಿಮಾ ತೆಲುಗಿನಲ್ಲೂ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಮಾಹಿತಿ ನೀಡಿತ್ತು. ಅದರ ಬೆನ್ನಲ್ಲೇ ಈಗ ಹಾಡಿನ ರಿಲೀಸ್ ಬಗ್ಗೆ ಹೊಸ ಅಪ್ ಡೇಟ್ ಬಂದಿದೆ.

ಕೋಟಿಗೊಬ್ಬ 3 ಸಿನಿಮಾದ ‘ನೀ ಕೋಟಿಯಲ್ಲೊಬ್ಬನೇ’ ಎಂಬ ಹಾಡು ಏಪ್ರಿಲ್ 2 ರಂದು ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಕೋಟಿಗೊಬ್ಬ 3 ಸಿನಿಮಾದ ಎರಡು ಹಾಡುಗಳು ಈ ಮೊದಲೇ ಬಿಡುಗಡೆಯಾಗಿತ್ತು. ಇದೀಗ ಮೂರನೇ ಹಾಡು ಬಿಡುಗಡೆಯಾಗುತ್ತಿದೆ. ಏಪ್ರಿಲ್ ಅಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ