ಸಮೃದ್ಧ ಭಾರತವನ್ನು ಎದುರು ನೋಡುತ್ತಿದ್ದೇನೆ, ಮೋದಿಗೆ ಶುಭಕೋರಿದ ನಟ ರಾಮ್‌ ಚರಣ್‌

sampriya

ಸೋಮವಾರ, 10 ಜೂನ್ 2024 (16:07 IST)
Photo By X
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 9 ರಂದು ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಅಭಿನಂದನಾ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆ. ನಟ ರಾಮ್ ಚರಣ್  ಅವರು ಮೋದಿಗೆ ಶುಭಕೋರಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ಭಾರತದ ಪ್ರೀತಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಸರ್ಕಾರ ನಿಮ್ಮ ಐತಿಹಾಸಿಕ ಮೂರನೇ ಅವಧಿಗೆ ಅಭಿನಂದನೆಗಳು. ನಿಮ್ಮ ಆಳ್ವಿಕೆಯ ಅಡಿಯಲ್ಲಿ ಹೆಚ್ಚು ಸಮೃದ್ಧ ಭಾರತವನ್ನು ಎದುರು ನೋಡುತ್ತಿದ್ದೇನೆ. ಜೈ ಹಿಂದ್ ನರೇಂದ್ರ ಮೋದಿ ಎಂಬ ಸಂದೇಶ ಸಾರಿದ್ದಾರೆ.

ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಆಕರ್ಷಕ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ಸಚಿವರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಿ ಮೋದಿಯವರಿಗೆ ಪ್ರಮಾಣ ವಚನ ಬೋಧಿಸಿದರು, ಅವರು ರಾಷ್ಟ್ರದ ಸೇವೆ ಮತ್ತು ಸಮೃದ್ಧಿಯ ಕಡೆಗೆ ತಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ