ಸಿನಿಮಾ ರಿಲೀಸ್ ದಿನವೇ ವಿವಾಹವಾದ ಲವ್ ಮಾಕ್ಟೇಲ್ 2 ನಟಿ

ಶುಕ್ರವಾರ, 11 ಫೆಬ್ರವರಿ 2022 (10:00 IST)
ಬೆಂಗಳೂರು: ಒಂದೆಡೆ ಲವ್ ಮಾಕ್ಟೇಲ್ 2 ರಿಲೀ‍ಸ್ ಆಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಖುಷಿಯಾದರೆ ಇತ್ತ, ಅದೇ ಸಿನಿಮಾದಲ್ಲಿ ನಟಿಸಿದ್ದ ನಟಿ ಸುಷ್ಮಿತಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಶ್ವಿನ್ ಗೌಡ ಎಂಬವರ ಜೊತೆ ಸುಷ್ಮಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಜಂಕಿ ಎಂಬ ಪಾತ್ರವನ್ನು ಸುಷ್ಮಿತಾ ನಿರ್ವಹಿಸಿದ್ದರು.

ಈ ವಿವಾಹ ಸಮಾರಂಭಕ್ಕೆ ಆಶಿಕಾ ರಂಗನಾಥ್, ಅನುಷಾ ರಂಗನಾಥ್ ಸೇರಿದಂತೆ ಸೆಲೆಬ್ರಿಟಿಗಳೂ ಆಗಮಿಸಿ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ